೩
ದಾವೀದನ ವಂಶಾವಳಿ 
 ೧ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು: ಚೊಚ್ಚಲಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು, ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು.  ೨ ಮೂರನೆಯವನು ಅಬ್ಷಾಲೋಮ್, ಇವನು ಗೆಷೂರಿನ ಅರಸನಾದ ತಲ್ಮೈ ಎಂಬವನ ಮಗಳಾದ ಮಾಕಳ ಮಗನು. ನಾಲ್ಕನೆಯವನು ಅದೋನಿಯ. ಇವನು ಹಗ್ಗೀತಳ ಪುತ್ರನು.  ೩ ಐದನೆಯವನು ಶೆಫಟ್ಯ, ಇವನು ಅಬೀಟಲಳ ಮಗನು. ಆರನೆಯವನು ಇತ್ರಾಮ್. ಇವನು ದಾವೀದನ ಹೆಂಡತಿಯಾದ ಎಗ್ಲಳಿಂದ ಹುಟ್ಟಿದವನು.  ೪ ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಜನರು ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರುಷ ಆರು ತಿಂಗಳು ಆಡಳಿತ ನಡೆಸಿದನು ಮತ್ತು ಯೆರೂಸಲೇಮನ್ನು ಮೂವತ್ತ್ಮೂರು ವರ್ಷ ಆಳಿದನು.  ೫ ಯೆರೂಸಲೇಮಿನಲ್ಲಿರುವಾಗ ಅವನಿಗೆ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಮಕ್ಕಳು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು.  ೬ ಇದಲ್ಲದೆ ಇಬ್ಹಾರ್, ಎಲೀಷಾಮ್, ಎಲೀಫೆಲೆಟ್,  ೭ ನೋಗ, ನೆಫೆಗ್, ಯಾಫೀಯ,  ೮ ಎಲೀಷಾಮ್, ಎಲ್ಯಾದ್, ಎಲೀಫೆಲೆಟ್ ಎಂಬ ಒಂಬತ್ತು ಮಕ್ಕಳು ಅವನಿಗೆ ಅಲ್ಲಿಯೇ ಹುಟ್ಟಿದರು.  ೯ ಉಪಪತ್ನಿಯಾರಿಂದಲೂ ಗಂಡು ಮಕ್ಕಳು ಹುಟ್ಟಿದರು. ತಾಮಾರ್ ಎಂಬ ಹೆಣ್ಣುಮಗಳೂ ದಾವೀದನಿಗೆ ಇದ್ದಳು. 
ಯೆಹೂದ್ಯರ ಅರಸರು 
 ೧೦ ಸೊಲೊಮೋನನ ಮಗ ರೆಹಬ್ಬಾಮ; ರೆಹಬ್ಬಾಮನ ಮಗ ಅಬೀಯನು. ಅಬೀಯನ ಮಗ ಆಸ; ಆಸನ ಮಗ ಯೆಹೋಷಾಫಾಟ;  ೧೧ ಯೆಹೋಷಾಫಾಟನ ಮಗ ಯೆಹೋರಾಮ್; ಯೆಹೋರಾಮನ ಮಗ ಅಹಜ್ಯನು, ಅಹಜ್ಯನ ಮಗ ಯೋವಾಷನು.  ೧೨ ಯೋವಾಷನ ಮಗ ಅಮಚ್ಯ. ಅಮಚ್ಯ ಮಗ ಅಜರ್ಯ; ಅಜರ್ಯನ ಮಗ ಯೋತಾಮ್.  ೧೩ ಯೋತಾಮನ ಮಗ ಆಹಾಜ; ಆಹಾಜನ ಮಗ ಹಿಜ್ಕೀಯನು. ಹಿಜ್ಕೀಯನ ಮಗ ಮನಸ್ಸೆಯು.  ೧೪ ಮನಸ್ಸೆಯ ಮಗ ಆಮೋನ್; ಆಮೋನನ ಮಗ ಯೋಷೀಯ.  ೧೫ ಯೋಷೀಯನ ಮಕ್ಕಳು: ಚೊಚ್ಚಲ ಮಗ ಯೋಹಾನಾನ್, ಎರಡನೆಯವನು ಯೆಹೋಯಾಕೀಮ್, ಮೂರನೆಯವನು ಚಿದ್ಕೀಯ, ನಾಲ್ಕನೆಯವನು ಶಲ್ಲೂಮ್.  ೧೬ ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು. 
ಯೆಹೋಯಾಕೀಮನ ವಂಶಜರು 
 ೧೭ ಬಾಬಿಲೋನಿಯರಿಂದ ಸೆರೆಗೆ ಒಯ್ಯಲ್ಪಟ್ಟ ಯೆಕೊನ್ಯನಿಗೆ ಹುಟ್ಟಿದ ಮಕ್ಕಳು ಶೆಯಲ್ತೀಯೇಲ್,  ೧೮ ಮಲ್ಕೀರಾಮ್, ಪೆದಾಯ್, ಶೆನಚ್ಚರ್, ಯೆಕಮ್ಯ, ಹೋಷಾಮ್ ಮತ್ತು ನೆದಬ್ಯ ಎಂಬ ಏಳು ಗಂಡುಮಕ್ಕಳು.  ೧೯ ಪೆದಾಯನ ಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತ್ ಎಂಬ ಮಗಳೂ ಇದ್ದಳು.  ೨೦ ಇವರಲ್ಲದೆ ಪೆದಾಯನಿಗೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ ಹೆಸೆದ್ ಎಂಬ ಐದು ಗಂಡು ಮಕ್ಕಳಿದ್ದರು.  ೨೧ ಹನನ್ಯನ ಸಂತಾನದವರು: ಪೆಲಟ್ಯ, ಯೆಶಾಯ ಮತ್ತು ರೆಫಾಯನ ಮಕ್ಕಳಾದ ಅರ್ನಾನ್, ಓಬದ್ಯ ಮತ್ತು ಶೇಕನ್ಯ.  ೨೨ ಶೆಕನ್ಯನ ಮಗ ಶೆಮಾಯ. ಶೆಮಾಯನಿಗೆ ಆರು ಗಂಡು ಮಕ್ಕಳು: ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್.  ೨೩ ನೆಯರ್ಯನ ಮೂರು ಗಂಡು ಮಕ್ಕಳು: ಎಲ್ಯೋಗೆನೈ, ಹಿಜ್ಕೀಯ ಮತ್ತು ಅಜ್ರೀಕಾಮ್.  ೨೪ ಎಲ್ಯೋಗೆನೈಯನ ಏಳು ಗಂಡು ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.