ಯಹೋವನ ಭಕ್ತಪಾಲನೆ 
 ೧೨೧
ಯಾತ್ರಾಗೀತೆ. 
(ಆದಿ. 28:15) 
 ೧ ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; 
ನನ್ನ ಸಹಾಯವು ಎಲ್ಲಿಂದ ಬರುವುದು? 
 ೨ ಭೂಮಿ, ಆಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ, 
ನನ್ನ ಸಹಾಯವು ಬರುತ್ತದೆ. 
 ೩ ಆತನು ನಿನ್ನ ಪಾದಗಳನ್ನು ಕದಲಗೊಡಿಸುವುದಿಲ್ಲ; 
ನಿನ್ನನ್ನು ಕಾಯುವವನು ತೂಕಡಿಸದಿರಲಿ. 
 ೪ ಇಗೋ, ಇಸ್ರಾಯೇಲರನ್ನು ಕಾಯುವಾತನು, 
ತೂಕಡಿಸುವುದೂ ಇಲ್ಲ, ನಿದ್ರಿಸುವುದೂ ಇಲ್ಲ. 
 ೫ ನಿನ್ನನ್ನು ಕಾಯುವವನು ಯೆಹೋವನೇ; 
ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ. 
 ೬ ಹಗಲಿನಲ್ಲಿ ಸೂರ್ಯನೂ, ಇರುಳಿನಲ್ಲಿ ಚಂದ್ರನೂ, 
ನಿನ್ನನ್ನು ಬಾಧಿಸುವುದಿಲ್ಲ. 
 ೭ ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; 
ನಿನ್ನ ಪ್ರಾಣವನ್ನು ಕಾಯುವನು. 
 ೮ ನೀನು ಹೋಗುವಾಗಲೂ, ಬರುವಾಗಲೂ, 
ಈಗಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.