4
ಅಪೊಸ್ತಲರ ಸೇವೆ
1 ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಗುಪ್ತವಾಗಿದ್ದ ಸತ್ಯಾರ್ಥಗಳ ವಿಷಯದಲ್ಲಿ ದೇವರ * 4:1 1 ಕೊರಿ 9:17; 1 ಪೇತ್ರ 4:10:ಮನೆವಾರ್ತೆಯವರೆಂತಲೂ ಪರಿಗಣಿಸಲಿ. 2 ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ. 3 ನನಗಾದರೂ ನಿಮ್ಮಿಂದಾಗಲಿ ಅಥವಾ ಮನುಷ್ಯರು ಮಾಡುವ ವಿಚಾರಣೆಯಾಗಲಿ ತೀರಾ ಲಘುವೆನಿಸಿದೆ. ನಾನೂ ನನ್ನನ್ನು ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ. 4  † 4:4 ಅ. ಕೃ. 23:1:ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಿಗೆ ತೋರುವುದಿಲ್ಲವಾದರೂ ನಾನು ‡ 4:4 ಕೀರ್ತ 130:3; 143:2; 1 ಯೋಹಾ 3:21:ನಿರ್ದೋಷಿಯೆಂದು ನಿರ್ಣಯಿಸುವಂತಿಲ್ಲ. ನನ್ನನ್ನು ನ್ಯಾಯವಿಚಾರಣೆ ಮಾಡುವವನು ಕರ್ತನೇ. 5 ಆದ್ದರಿಂದ ಕರ್ತನು ಬರುವ § 4:5 ಮತ್ತಾ 7:1; ರೋಮಾ. 2:1; ಮತ್ತಾ 13:29:ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು * 4:5 1 ಕೊರಿ 3:13:ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. † 4:5 2 ಕೊರಿ 10:18:ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು.
ಪೌಲನು ಕೊರಿಂಥ ಸಭೆಯವರನ್ನು ತಂದೆಯೋಪಾದಿಯಲ್ಲಿ ಗದರಿಸಿದ್ದು
6 ಪ್ರಿಯರೇ, ನಾನು ನಿಮಗೋಸ್ಕರವಾಗಿ ನನ್ನಗೂ ಅಪೊಲ್ಲೋಸನಿಗೂ ಈ ನಿಯಮಗಳನ್ನೆಲ್ಲಾ ಅನ್ವಯಿಸಿಕೊಂಡು ಹೇಳಿದ್ದೇನೆ. ಆದ್ದರಿಂದ ನೀವು “ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಬಾರದು,” ಎಂಬ ಈ ವಾಕ್ಯದ ಅರ್ಥವನ್ನು ನಮ್ಮಿಂದ ಕಲಿತುಕೊಂಡು, ನಿಮ್ಮಲ್ಲಿ ಯಾವನಾದರೂ ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ‡ 4:6 1 ಕೊರಿ 4:18, 19; 5:2; 13:4:ಉಬ್ಬಿಕೊಳ್ಳಬಾರದು ಎಂಬುದಕ್ಕಾಗಿದೆ. 7 ನಿನ್ನನ್ನು ಇತರರಿಗಿಂತಲೂ ಶ್ರೇಷ್ಠನನ್ನಾಗಿ ಮಾಡಿದವರು ಯಾರು? § 4:7 ಯೋಹಾ 3:27:ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದಿದ್ದಲ್ಲವೆಂಬಂತೆ ಯಾಕೆ ಕೊಚ್ಚಿಕೊಳ್ಳುತ್ತೀ? 8 ಇಷ್ಟು ಬೇಗನೆ ನೀವು ತೃಪ್ತರಾದಿರಿ. ಇಷ್ಟುಬೇಗನೆ ಐಶ್ವರ್ಯವಂತರಾದಿರಿ. ನಮ್ಮ ಸಹಾಯವಿಲ್ಲದೆ ಅರಸರಂತೆ ಆದಿರಿ. ನೀವು ನಿಜವಾಗಿ ಆಳುವವರಾಗಿದ್ದರೇ ನನಗೆ ಆನಂದವಾಗುತ್ತಿತ್ತು. ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೇವು. 9 ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು * 4:9 ರೋಮಾ. 8:36:ಮರಣದ ತೀರ್ಪು ಹೊಂದಿದವರಂತೆ † 4:9 ಅಥವಾ ಕಡೆ ವಿನೋದವಾಗಿ. ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು. 10  ‡ 4:10 ಅ. ಕೃ. 17:18; 26:24; 1 ಕೊರಿ 1:18:ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. § 4:10 2 ಕೊರಿ 11:19:ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. * 4:10 1 ಕೊರಿ 2:3; 2 ಕೊರಿ 13:9:ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು. 11 ಈ ಗಳಿಗೆಯವರೆಗೂ † 4:11 ರೋಮಾ. 8:35; 2 ಕೊರಿ 11:27; ಫಿಲಿ. 4:12:ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ‡ 4:11 2 ಕೊರಿ 11:20, 23:ಪೆಟ್ಟು ತಿನ್ನುವವರೂ § 4:11 ಮತ್ತಾ 8:20:ಮನೆಯಿಲ್ಲದವರೂ, 12  * 4:12 ಅ. ಕೃ. 18:3:ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. † 4:12 1 ಪೇತ್ರ 3:9:ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ. 13 ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ‡ 4:13 ಪ್ರಲಾ 3:45:ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ.
14 ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ § 4:14 2 ಕೊರಿ 6:13; 1 ಥೆಸ. 2:11:ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ. 15  * 4:15 1 ಕೊರಿ 3:10:ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ † 4:15 ಫಿಲೆ. 10. ಗಲಾ. 4:19:ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ. 16 ಆದ್ದರಿಂದ ‡ 4:16 1 ಕೊರಿ 11:1; ಫಿಲಿ. 3:17; 4:9; 1 ಥೆಸ. 1:6:ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 17 ಈ ಕಾರಣದಿಂದ § 4:17 1 ತಿಮೊ. 1:2; 2 ತಿಮೊ. 1:2:ಕರ್ತನಲ್ಲಿ ನನ್ನ ಪ್ರಿಯ ಮತ್ತು ನಂಬಿಗಸ್ತ ಮಗನಾದ ತಿಮೊಥೆಯನನ್ನು * 4:17 1 ಕೊರಿ 16:10:ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. † 4:17 1 ಕೊರಿ 7:17:ನಾನು ಪ್ರತಿಯೊಂದು ಸಭೆಗಳಲ್ಲಿಯೂ, ಎಲ್ಲೆಲ್ಲಿಯೂ ಬೋಧಿಸುವ ಹಾಗೆ ಕ್ರಿಸ್ತನಲ್ಲಿರುವ ನನ್ನ ನಡವಳಿಕೆಗಳನ್ನು ಅವನು ನಿಮ್ಮ ನೆನಪಿಗೆ ತರುವನು. 18 ನಿಮ್ಮಲ್ಲಿ ಕೆಲವರು ಪೌಲನು ನಮ್ಮ ಬಳಿಗೆ ಬರುವುದಿಲ್ಲವೆಂದು ತಿಳಿದು ‡ 4:18 1 ಕೊರಿ 4:6:ಉಬ್ಬಿಕೊಂಡಿದ್ದಾರೆ. 19 ಆದರೆ ಕರ್ತನ ಚಿತ್ತವಾದರೆ § 4:19 1 ಕೊರಿ 11:34; 16:5, 6; ಅ. ಕೃ. 19:21; 20:2; 2 ಕೊರಿ 1:15, 16:ನಾನು ಬೇಗನೆ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನು ಮಾತ್ರವಲ್ಲ ಅವರ ಬಲವನ್ನು ಕಂಡುಹಿಡಿಯುತ್ತೇನೆ. 20  * 4:20 1 ಕೊರಿ 2:4:ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ. 21 ನಿಮ್ಮ ಇಷ್ಟವೇನು? † 4:21 2 ಕೊರಿ 13:2, 10 ಇತ್ಯಾದಿ. ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯದ ಆತ್ಮದಿಂದಲೂ ಕೂಡಿದವನಾಗಿ ಬರಲೋ?

*4:1 4:1 1 ಕೊರಿ 9:17; 1 ಪೇತ್ರ 4:10:

†4:4 4:4 ಅ. ಕೃ. 23:1:

‡4:4 4:4 ಕೀರ್ತ 130:3; 143:2; 1 ಯೋಹಾ 3:21:

§4:5 4:5 ಮತ್ತಾ 7:1; ರೋಮಾ. 2:1; ಮತ್ತಾ 13:29:

*4:5 4:5 1 ಕೊರಿ 3:13:

†4:5 4:5 2 ಕೊರಿ 10:18:

‡4:6 4:6 1 ಕೊರಿ 4:18, 19; 5:2; 13:4:

§4:7 4:7 ಯೋಹಾ 3:27:

*4:9 4:9 ರೋಮಾ. 8:36:

†4:9 4:9 ಅಥವಾ ಕಡೆ ವಿನೋದವಾಗಿ.

‡4:10 4:10 ಅ. ಕೃ. 17:18; 26:24; 1 ಕೊರಿ 1:18:

§4:10 4:10 2 ಕೊರಿ 11:19:

*4:10 4:10 1 ಕೊರಿ 2:3; 2 ಕೊರಿ 13:9:

†4:11 4:11 ರೋಮಾ. 8:35; 2 ಕೊರಿ 11:27; ಫಿಲಿ. 4:12:

‡4:11 4:11 2 ಕೊರಿ 11:20, 23:

§4:11 4:11 ಮತ್ತಾ 8:20:

*4:12 4:12 ಅ. ಕೃ. 18:3:

†4:12 4:12 1 ಪೇತ್ರ 3:9:

‡4:13 4:13 ಪ್ರಲಾ 3:45:

§4:14 4:14 2 ಕೊರಿ 6:13; 1 ಥೆಸ. 2:11:

*4:15 4:15 1 ಕೊರಿ 3:10:

†4:15 4:15 ಫಿಲೆ. 10. ಗಲಾ. 4:19:

‡4:16 4:16 1 ಕೊರಿ 11:1; ಫಿಲಿ. 3:17; 4:9; 1 ಥೆಸ. 1:6:

§4:17 4:17 1 ತಿಮೊ. 1:2; 2 ತಿಮೊ. 1:2:

*4:17 4:17 1 ಕೊರಿ 16:10:

†4:17 4:17 1 ಕೊರಿ 7:17:

‡4:18 4:18 1 ಕೊರಿ 4:6:

§4:19 4:19 1 ಕೊರಿ 11:34; 16:5, 6; ಅ. ಕೃ. 19:21; 20:2; 2 ಕೊರಿ 1:15, 16:

*4:20 4:20 1 ಕೊರಿ 2:4:

†4:21 4:21 2 ಕೊರಿ 13:2, 10 ಇತ್ಯಾದಿ.